ರಂಗ ಮತ್ತು ಸಾಧಿಕ್ ಇಬ್ಬರೂ ಜೀವದ ಗೆಳೆಯರು. ಅವರಿಬ್ಬರ ಆಸಕ್ತಿ
ಅಭಿರುಚಿಗಳು ಒಂದೇ ಆಗಿದ್ದವು. ದಿನಾಲು ಸೈಕಲ್ ಸವಾರಿ ಮಾಡುತ್ತಾ ಶಾಲೆಗೆ
ಹೋಗುವುದೆಂದರೆ ಅವರಿಗೆ ಎಲ್ಲಿಲ್ಲದ ಖುಷಿ,
ಅವರು ಶಾಲೆಗೆ ಹೋಗುವ ದಾರಿಯಲ್ಲಿ ಒಂದು ಚಿಕ್ಕ ಕಾಡು, ಆ ಕಾಡಿನಲ್ಲಿ
ಒಂದು ನೇರಳೆ ಮರವಿತ್ತು. ನೇರಳೆ ಮರದ ಹಣ್ಣು ತಿನ್ನುವುದೆಂದರೆ ರಂಗ ಮತ್ತು
ಸಾಧಿಕರಿಗೆ ತುಂಬ ಸಂತಸ,
ಒಂದು ಶನಿವಾರ ಮಧ್ಯಾಹ್ನ ಶಾಲೆ ಮುಗಿಸಿ, ರಂಗ ಮತ್ತು ಸಾಧಿಕ್ ಇಬ್ಬರು
ನೇರಳೆ ಮರದ ಬುಡಕ್ಕೆ ತಲುಪಿದರು. ಆಗ ಅಲ್ಲಿಯೇ ಒಣ ಕಟ್ಟಿಗೆಗಳನ್ನು ಆರಿಸುತ್ತಿದ್ದ
ಅಜ್ಜಿಯೊಬ್ಬರು, “ಹುಷಾರು ಮಕ್ಕಳೇ, ಮರ ಜಾರುತ್ತೆ, ಜೋಪಾನ ಎಂದು ಹೇಳಿದರು.
ಅದಕ್ಕೆ ರಂಗ, ಸಾಧಿಕ್ “ಆಯ ನೀವೇನೂ ಚಿಂತೆ ಮಾಡಬೇಡಿ” ಎಂದರು. ರಂಗ
ಮರ ಹತ್ತಲು ಪ್ರಾರಂಭಿಸಿದನು. ಸಾಧಿಕ್ ನೇರಳೆ ಹಣ್ಣನ್ನು ಕ್ಯಾಚ್ ಹಿಡಿಯಲು ಸಿದ್ಧವಾಗಿ
ನಿಂತನು.
ಅಷ್ಟರಲ್ಲಿ 'ಅಯ್ಯೋ, ಅಪ್ಪಾ.. ಯಾರಾದ್ರೂ ನನ್ನ ಬದುಕಿಸೋ' ಎಂದು ಅಜ್ಜಿ
ಕೂಗಿದ ಸದ್ದು ಕೇಳಿಸಿತು. ಸಾಧಿಕ್ ಕೂಡಲೆ ಅತ್ತ ಕಡೆ ಓಡಿದ, ರಂಗ ಗಾಬರಿಯಿಂದ
be
ಮರ ಇಳಿದು ಬಂದ. “ಏನಾಯ್ತಜ್ಜಿ ಯಾಕೆ ಕೂಗಿಕೊಂಡೆ?" ಎಂದು ಆತುರದಿಂದ
ಕೇಳಿದ. ಅಜ್ಜಿ ತಮ್ಮ ಕಾಲಿನ ಕಡೆಗೊಮ್ಮೆ, ಮೊದೆಯ ಕಡೆಗೊಮ್ಮೆ ಕೈತೋರಿಸುತ್ತ
'ಹಾವು..! ಹಾವು...' ಎಂದು ಕೂಗಿಕೊಂಡರು. ತಕ್ಷಣ ಸಾಧಿಕ್, ಅಜ್ಜಿ ಕೈ ತೋರಿಸಿದ
ಕಡೆಗೆ ಹೋಗಿ ಹಾವನ್ನು ಹುಡುಕತೊಡಗಿದ. ರಂಗ ಅಜ್ಜಿಯ ಕಾಲನ್ನು ನೋಡಿ
ಅಲ್ಲಿಯೇ ಇದ್ದ ಗಿಡದ ಬಳ್ಳಿಯಿಂದ ಹಾವಿನ ವಿಷ ಅಜ್ಜಿಯ ಮೈಯೆಲ್ಲ ಹರಡದಂತೆ
ಗಾಯದ ಮೇಲ್ಬಾಗದಲ್ಲಿ ಗಟ್ಟಿಯಾಗಿ ಕಟ್ಟುಹಾಕಿದ. ಅಷ್ಟರಲ್ಲಿ ಸಾಧಿಕ್ ಮೊದೆಯಲ್ಲಿ
ಹರಿದಾಡುತ್ತಿದ್ದ ಹಾವನ್ನು ಕಂಡು “ರಂಗ ಬಾರೋ ಇಲ್ಲಿ, ಹಾವು ಸಿಕ್ಕಿದೆ. ಸಾಯಿಸೋಣ
ಎಂದ. ಅದಕ್ಕೆ ರಂಗ 'ಅಜ್ಜಿಯನ್ನು ಆಸ್ಪತ್ರೆಗೆ ಕೊಂಡೊಯ್ಯೋದು ಹಾವು
ಸಾಯಿಸುತ್ತಾನಂತೆ. ತಲೆ ಕೆಟ್ಟಿದೆಯೇನೋ ನಿಂಗೆ?' ಎನ್ನುತ್ತಾ ಅಜ್ಜಿಯನ್ನು
ಎತ್ತಿ ಕೂರಿಸಿ ಸರಸರನೆ ಹೊರಟನು. ರಂಗ ಬೈದಿದ್ದಕ್ಕೆ ಬೇಸರಗೊಂಡ ಸಾಧಿಕ್ ಮುಖ
ಸಪ್ಪಗೆ ಮಾಡಿ ಮನೆಗೆ ಹೋದನು.
ರಂಗ ಅಜ್ಜಿಗೆ ಆಸತ್ರೆಯಲ್ಲಿ ಚಿಕಿತ್ಸೆ ಕೊಡಿಸಿದನು. ವೈದ್ಯರು ರಂಗನ ಬಳಿ, ಅಜ್ಜಿಗೆ
ಕಚ್ಚಿರುವ ಹಾವು ವಿಷದ ಹಾವಲ್ಲ, ಹಾಗಾಗಿ ಅಜ್ಜಿಗೆ ಅಪಾಯವೇನಿಲ್ಲ' ಎಂದರು.
ರಂಗನಿಗೆ ಸಮಾಧಾನವಾಯಿತು. ಅನಂತರ ಅಜ್ಜಿಯನ್ನು ಅವರ ಮನೆಗೆ ಬಿಟ್ಟು ತನ್ನ
ಮನೆಗೆ ತೆರಳಿದನು.